ಗುರುವಾರ, ಸೆಪ್ಟೆಂಬರ್ 17, 2015

Idu TrigunathmakaPrapanchaMovie1

ಇದು ತ್ರಿಗುಣಾತ್ಮಕ ಪ್ರಪಂಚ. ಜಗದ ವಿಷಮತೆಗೆ ದೇವರು ಹೊಣೆಯಲ್ಲ ನಮ್ಮಲ್ಲಿ ಎಲ್ಲೆಡೆಗಳಲ್ಲಿರುವ ಪ್ರಕೃತಿಜನ್ಯ ತ್ರಿಗುಣ ಸ್ವಭಾವಗಳೇ ಕಾರಣ. ಅಲ್ಲದೇ, ವಿಜ್ಞಾನದ ದುರ್ಬಳಕೆಗಳೇ ಕಾರಣ. ಇಲ್ಲಿ ಎಲ್ಲಕಾಲಕ್ಕೂ ರಜಸ್ಸಿನ ಮತ್ತು ತಮಸ್ಸಿನ ಪ್ರಭಾವ ಪರಿಣಾಮಗಳೇ ಎದ್ದು ತೋರುತ್ತಲಿರುತ್ತವೆ. ಅವುಗಳೆಂದರೆ, ರಜಸ್ಸಿನ ಆಸೆ,ಭೋಗದ ಆಮಿಷ,ಪ್ರಲೋಭನೆಗಳಿಂದ ರೋಷ, ಆವೇಶ, ಕ್ರೋಧ, ದ್ವೇಷ, ಹೊಟ್ಟೆಕಿಚ್ಚು, ನೀಚಸ್ವಾರ್ಥಗಳ, ತಮಸ್ಸಿನ ಅಂಧಕಾರದಿಂದ ಅತಿಭೋಗಲಾಲಸೆ,ಅತ್ಯಾಚಾರ,ಧನದುರಾಸೆ,ಅಧಿಕಾರದಾಹ, ಭ್ರಷ್ಟಾಚಾರ, ಸೇಡು, ದಳ್ಳುರಿ, ಸುಲಿಗೆ ಕೊಲೆ, ಭಯೋತ್ಪಾದನೆ ಇವುಗಳೆಲ್ಲ ಮೃಗಗಳಿಗಿಂತ ಹೇಯವಾದ ತಮಂಧದ ಕೇಡುಕು ಅನಾಹುತಗಳು.
ಎಲ್ಲಕಾಲಕ್ಕೂ ಸತ್ವಗುಣ-ಸತ್ ಶಕ್ತಿಯು ಮೂರನೇ ಒಂದು ಭಾಗ ಮಾತ್ರ ಇರುತ್ತದೆಂಬುದು ಗಮನಾರ್ಹವಾಗಿದೆ. ಹೇಳಿ..? ಯಾವ ಗುಂಪಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳಬೇಕೆಂಬುದೂ ನಮಗೇ ಬಿಟ್ಟ ವಿಚಾರವೇ ಆಗಿದೆ ಅಲ್ಲವೇ..?
ಆದರೇನು! ಸತ್ವ-ಸತ್ಶಕ್ತಿಯ ಪ್ರಭಾವ ಪರಿಣಾಮಗಳು ಇಲ್ಲವೆಂದರೂ, ಇದು ಅವ್ಯಕ್ತ ಅಗೋಚರಶಕ್ತಿಯೇ ಆಗಿದ್ದು, ಆಗಾಗ್ಗೆ ಕಂಡುಬರುತ್ತಲೇ ಇರುತ್ತದೆ. ಬೂದಿ ಮುಚ್ಚಿದ ಕೆಂಡಂತೆ ಮತ್ತೆ ಮತ್ತೆ ಸಿಡಿದೇಳುತ್ತಲೇ ಇರುತ್ತದೆ; ಧಾರ್ಮಿಕತೆಯಲ್ಲಿ ಮಾನವೀಯತೆಯಾಗಿ, ಮಾನವೀಯತೆಯಲ್ಲಿ ದೈವಿಕತೆಯಾಗಿ ದೈವಿಕತೆಯಲ್ಲಿ ಧರ್ಮಸಂರಕ್ಷಣೆಗಾಗಿ ಯಾವುದೋ ರೂಪದಲ್ಲಿ ಮತ್ತೆ ಯಾವುದೋ ಧೀಮಂತ ವ್ಯಕ್ತಿತ್ವದ ಕ್ಷಾತ್ರ ತೇಜಸ್ಸಿನಲ್ಲಿ ವಿಶ್ವಜೀವನದಲ್ಲಿ ಎಲ್ಲೆಡೆಗಳಿಗೂ ಬೀರುತ್ತಲೇ ಸತ್ವಗುಣ ಸತ್ಶಕ್ತಿಯ ಹಿರಿಮೆಯನ್ನು ನಿರೂಪಿಸುತ್ತ ಹೊಸ ಇತಿಹಾಸ ರಚಿಸುತ್ತದೆ. [ತ್ರಿಗುಣಗಳ ಬಗ್ಗೆ ಭಗವದ್ಗೀತೆಯಲ್ಲಿ ವಿಶ್ಲೇಷಣೆ ಇದೆ ಅಧ್ಯಾಯ 14]