ಭಾನುವಾರ, ಏಪ್ರಿಲ್ 21, 2019

ನನ್ನ ಜೀವನದಲ್ಲಿ ಏಪ್ರಿಲ್ 19 ರ ಪ್ರಾಮುಖ್ಯತೆ!
ನನಗೆ  ನೆನಪು, 1993 ರ April ಸೋಮವಾರ (26 ವರ್ಷಗಳ ಹಿಂದೆ) ಅಂದು ಮೊಟ್ಟ ಮೊದಲ ಬಾರಿಗೆ  ಇಲಾಖೆಯ ಎಲ್ ಟಿಸಿ. ಸೌಲಭ್ಯ ಪಡೆದು ಇದ್ದಕ್ಕಿದ್ದಂತೆ ತಿರುಪತಿ ತಿರುಮಲೆ ಯಾತ್ರೆಗೆ ಹೊರಟೆ,  ಅಂದು ನನ್ನ ಶ್ರೀಮತಿ ಯ ಬಹುದಿನದ ಒತ್ತಾಯ ಪೂರ್ವಕ ಅಭಿಲಾಷೆ ಈಡೇರಿತ್ತು.  ಅಂದು ಯಾತ್ರಾರ್ಥಿಗಳಿಗೆ, ಗರ್ಭ ಗುಡಿಯ
ಅತಿ ಸಮೀಪವೇ ದರ್ಶನ ಭಾಗ್ಯ ಲಭಿಸುತ್ತಿತ್ತು.
ನನ್ನ ಹೆಂಡತಿ ಮತ್ತು ಮೂವರು ಗಂಡು ಮಕ್ಕಳನ್ನು ಮುಂದೆ ಬಿಟ್ಟುಕೊಂಡು ಸರತಿ ಸಾಲಿನಲಿ ಬಂದಿದ್ದೆ. ಮಕ್ಕಳೊಂದಿಗೆ ನಿಂತು ನನ್ನಾಕೆ ದರ್ಶನ ಪಡೆದು ಮುಂದೆ ಸಾಗಿ ಹೋದರೂ,
ನಾನು ಮಾತ್ರ ಗರ್ಭಗುಡಿ ಮುಂದೆ ಶ್ರೀನಿವಾಸನ ಮೂರ್ತಿ ನೋಡುತ್ತಾ ನಿಂತು ಬಿಟ್ಟೆ. ಇಂದಿನಂತೆಯೇ ಅಂದೂ 'ನಡೆಯಿರಿ ನಡೆಯಿರಿ' ಎನ್ನುತ್ತ ಸೇವಕರ ಕೂಗೂ, ಕ್ಯೂನಲ್ಲಿ ಕೈಮುಗಿದು ಕೊಡಲೇ ಸಾಗದಿದ್ದರೇ ರೆಟ್ಟೆ ಹಿಡಿದು ಎಳೆಯುವುದಿತ್ತು.
ನಾನೋ ಇಹವನ್ನೇ ಮರೆತು ಶ್ರೀನಿವಾಸನ ಮೂರ್ತಿಯನ್ನು  ತದೇಕ ಚಿತ್ತದಿಂದ ನೋಡುತ್ತಾ ನಿಂತಿದ್ದೆ. ಕೆಲ ಕ್ಷಣಗಳೇ ಕಳೆದಿದ್ದೀತು. ಹಣೆಯಲ್ಲಿ ಕೆಂಪು ನಾಮ, ಮೈಮೇಲೊಂದು ಜರಿ ಶಲ್ಯ ವಿತ್ತು .
ಆಶ್ಚರ್ಯವೆಂದರೆ ಆ ಕ್ಷಣಗಳಲ್ಲಿ ನನ್ನನ್ನು ಕಾವಲು ಸೇವಕರ್ಯಾರೂ ಎಳೆದು ಹೊರ ಹೋಗಿ ಎನ್ನಲಿಲ್ಲ. ನಾನೇ ತಟ್ಟನೆಚ್ಚೆತ್ತು ಸಾಗಿ ಹೊರ ಬಂದಿದ್ದೆ. ಆನಂತರ ಏಳು ಸಲ ತಿರುಮಲೆ ಯಾತ್ರೆಯಾಗಿದೆಯಾದರೂ ಅಂದಿನ ಅಪೂರ್ವ ದರ್ಶನ ಮತ್ತೆ ಲಭಿಸಲಿಲ್ಲ. ಅಂದಿಗಿಂತಲೂ ಇಂದು ಜನದಟ್ಟಣೆ ಹೆಚ್ಚಿದೆ ಹಾಗಾಗಿ ಶಾಂತಿಯುತ ದರ್ಶನಕೆ ಆಸ್ಪದವೂ ಇಲ್ಲವೆನ್ನಿ.
What a coincidence! ಇದೇನು ಸುಂದರ ಸುಮಧುರ ಸ್ಮೃತಿ! ಹೀಗೇ ಸುಮ್ಮನೆ ಕಳಿತಿದ್ದಾಗ,
ಇಂದಿನ ವೃದ್ಧಾಪ್ಯದಲ್ಲಿ ಯಾಕೋ ಅದೇ ಗೆಟಪ್ನಲ್ಲಿ ಈ ಸೆಲ್ ಫೀ ತೆಗೆದಮೇಲೆ ನೆನಪಾಯಿತು; ಇಂದು ನನ್ನ ಜೀವನದಲ್ಲಿ
ಏಪ್ರಿಲ್ 19 ರ ಪ್ರಾಮುಖ್ಯತೆ!