ಬುಧವಾರ, ಫೆಬ್ರವರಿ 17, 2021

ವ್ಯಾಸಭಾರತ ಮೂಲ ಅಭಿನವ ಭಾರತ...ನಿರೀಕ್ಷೆಯಲ್ಲಿ...

 ಮಹಾಭಾರತ ಕಥನದಲ್ಲಿ, ಕರ್ಣನನ್ನೇ ಗ್ರೇಟ್ ಮಾಡುವುದು ಸರಿಯಲ್ಲ.

 ಹುಟ್ಟು ನತದೃಷ್ಟ ನಾದರೂ ಬುದ್ಧಿವಂತನಾದವನು ನಕ್ಷತ್ರ ಗ್ರಹಗತಿಗಳನ್ನು ಆಳಲಾರದಾದ  ಎಂಬುದಕ್ಕೆ ಮಾದರಿ.

ಕ್ರೀಡಾಂಗಣದಲ್ಲೇ ಅಂಗರಾಜನನ್ನಾಗಿ ಪಟ್ಟಕಟ್ಟಲು, ಬಂಗಾರ ಪೀಠದ ಮೇಲೆ  ಬಲವಂತವಾಗಿ ಕೂರಿಸಿ ದಾಗ, ಕೊಡವಿಕೊಂಡೆದ್ದು ಹೊರ ಬರಲು ಇದ್ದ ಒಂದು ಅವಕಾಶವನ್ನೂ ಕಳೆದುಕೊಂಡದ್ದಕ್ಕೆ ಮಾದರಿ.

ದುಷ್ಟ ಸಹವಾಸದಲ್ಲೆ ಉಳಿದು ಸನ್ನಿವೇಶದ ಶಿಶುವಾದದ್ದಕ್ಕೆ ಮಾದರಿ.   

ಸಹವಾಸ ದೋಷದಲ್ಲಿ ಹಿಂದಿರುಗಿ ಬರಲಾದಷ್ಟು ದೂರಹೋದುದಕ್ಕೆ  ಮಾದರಿ. 

ಸ್ನೇಹಿತನ ಋಣಕ್ಕೆ ಬದ್ಧನಾಗಿ ಅವನ 

ತಾಳಕ್ಕೆ ತಕ್ಕಂತೆ ಕುಣಿಯುತ್ತ ತನ್ನ ಸ್ವಂತಿಕೆ

ಸದ್ಗುಣಗಳಿಗೆ ಮಸಿಬಳಿದು ಕೊಂಡ ಮಾದರಿ.   ಆದರೆ,  ತನ್ನಶೀಲಾ ಚಾರಿತ್ರ್ಯ ಉಳಿಸಿಕೊಂಡು, ದುಷ್ಟ  ಸ್ನೇಹಿತನ ಸಿರಿವಂತಕೆಯಿಂದಲೆ ಬಂದದ್ದನ್ನೇ ಸದ್ವಿನಿಯೋಗ ಮಾಡುತ್ತಾ ಮಹಾದಾನಿಯಾದ ಕರ್ಣನಿಗೆ ಕರ್ಣನೇ 

ಎಂಬ ಮಾದರಿ.

ದುಷ್ಟನ ಹೆಂಡತಿ ಭಾನುಮತಿಗೆ ಸೋದರನಂತೇ ಇದ್ದುದಕ್ಕೂ ಮಾದರಿ.

ತನ್ನ ಜನ್ಯರಹಸ್ಯ ತಿಳಿದಂದಿನಿಂದಲೇ ಒಳಗೊಳಗೇ ಕೊರಗಿದ. 

ಅವರು ತನ್ನ ಒಡಹುಟ್ಟಿದವರೆಂದು 

ತಿಳಿದಾಗ ತನಗೆ ಶತ್ರುಗಳಲ್ಲವೆಂದರಿತು, 

ಹೇಗೂ ದೈವ ಬಲ,ಧರ್ಮ ಅವರಿಗಿದೆ

 ಅಲ್ಲೇ ಜಯವೆಂದು ಅರಿತು ತಾನು ಸೋಲುವುದು ನಿಶ್ಚಯವೆಂದೇ  ಜಿಗುಪ್ಸೆ ಯಿಂದಲೇ ಅರ್ಜುನನೊಬ್ಬನ ಮೇಲೇ ಹಿಂಸ್ರ ಪಶುವಿನಂತೆ ಸೆಣಸಾಡುತ್ತ ವೀರ ಮರಣವನ್ನು ತಂದುಕೊಂಡ ದುರಂತ ನಾಯಕ. ನಿರೀಕ್ಷಿಸಿ,  ಶೀಘ್ರ ಬರಲೆಂದು ,

ಶ್ರೀ ಕೃಷ್ಣನ ಕೃಪೆಯಲ್ಲಿ "ಅಭಿನವ ಭಾರತ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ